ರಾಷ್ಟ್ರೀಯ

ರಷ್ಯಾ ಉಕ್ರೇನ್ ಸಮರ: ಚಿನ್ನ, ಬೆಳ್ಳಿ ಬಲು ದುಬಾರಿ

ಮುಂಬೈ: ರಷ್ಯಾ- ಉಕ್ರೇನ್ ಸಮರ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಶುಕ್ರವಾರ(ಫೆ.25) ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ದೇಶದಲ್ಲಿ ಶುಕ್ರವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 850 ರೂ. ಏರಿಕೆಯಾಗಿದ್ದು, ಬೆಲೆ 46,000 ರೂ ತಲುಪಿದೆ.
ಚೆನ್ನೈ- 48,270 ರೂ, ಮುಂಬೈ- 46,850 ರೂ, ದೆಹಲಿ- 46,850 ರೂ, ಕೊಲ್ಕತ್ತಾ- 46,850 ರೂ, ಬೆಂಗಳೂರು- 46,850 ರೂ.ಗೆ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 930 ರೂ. ಏರಿಕೆಯಾಗಿ 50,180 ರೂ.ಗೆ ಜಿಗಿತ ಕಂಡಿದೆ. ಚೆನ್ನೈ- 52,660 ರೂ, ಮುಂಬೈ- 51,110 ರೂ, ದೆಹಲಿ- 51,110 ರೂ, ಕೊಲ್ಕತ್ತಾ- 51,110 ರೂ, ಬೆಂಗಳೂರು- 51,110 ರೂ.ಗೆ ಏರಿಕೆಯಾಗಿದೆ.
ಒಂದು ಕೆಜಿ ಬೆಳ್ಳಿಗೆ 1,700 ರೂ. ಹೆಚ್ಚಳವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ ಗುರುವಾರ 64,300 ರೂ. ಇತ್ತು. ಇಂದು 1,700 ರೂ. ಏರಿಕೆ ಕಾಣುವ ಮೂಲಕ 66,000 ರೂ. ಆಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!