ಅಂತಾರಾಷ್ಟ್ರೀಯ
ಟಿ ವಿ ಟವರ್ ಮೇಲೆ ರಷ್ಯಾ ದಾಳಿ, ಐವರ ಸಾವು: ಪ್ರಸಾರ ಸ್ಥಗಿತ

ಕೀವ್: ಉಕ್ರೇನ್ ರಾಜಧಾನಿ ಕೀವ್ ನಲ್ಲಿ ರುವ ಟಿ ವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.
ಟಿ ವಿ ಟವರ್ ಮೇಲಿನ ದಾಳಿಯಿಂದ ಉಕ್ರೇನ್ ನಲ್ಲಿರುವ ಉಪಗ್ರಹ ವಾಹಿನಿಗಳು ಪ್ರಸಾರ ಸ್ಥಗಿತಗೊಳಿಸಿವೆ.
ನಾಗರಿಕ ನೆಲೆಗಳನ್ನು ಗುರಿಯಾಗಿರಿಸಿ ರಷ್ಯಾ ತೀವ್ರ ದಾಳಿ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ.