ಮುಖ್ಯಮಂತ್ರಿಗಳ ಚೊಚ್ಚಲ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿತ್ತ ಸಚಿವರಾಗಿ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಕೃಷಿ ವಲಯ, ಮೀನುಗಾರಿಕೆ, ಮಹಿಳಾ ಸಬಲೀಕರಣಕ್ಕೆ ಒತ್ತನ್ನು ನೀಡಲಾಗಿದ್ದು, ನವಕರ್ನಾಟಕ ನಿರ್ಮಾಣಕ್ಕೆ ಪಂಚಸೂತ್ರಗಳನ್ನು ಅಳವಡಿಸಕೊಳ್ಳಲಾಗಿದೆ.
ಟೆಂಡರ್‌ಗಳ ಪರಿಶೀಲನೆಗೆ ರಾಜ್ಯ ಮಟ್ಟದ ಸಮಿತಿ, ಮೀನುಗಾರ ಮಹಿಳೆಯರಿಗೆ ಐದು ಸಾವಿರ ಮನೆಗಳ ನಿರ್ಮಾಣ, ರೈತಶಕ್ತಿ ಯೋಜನೆ ಮೂಲಕ ರೈತರಿಗೆ 250 ರೂ. ಡೀಸೆಲ್ ಸಹಾಯಧನ, ವಿನೂತನ ಏಳು ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಎರಡು ಕೃಷಿ ಕಾಲೇಜುಗಳ ಸ್ಥಾಪನೆ, ರೈತ ಸಮ್ಮಾನ್ ಕಾರ್ಯಕ್ರಮ ಮುಂದುವರಿಕೆ, 15 ಸಾವಿರ ಶಿಕ್ಷಕರ ನೇಮಕಾತಿ, ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಗೆ ಒತ್ತು ನೀಡಿದ ರೀತಿಯು ರಾಜ್ಯದ
ಅಭಿವೃದ್ಧಿಯ ದೃಷ್ಟಿಯಿಂದ ಮಾಡಲಾದ ಅತ್ಯುತ್ತಮ ಬಜೆಟ್
ಇದಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಮಟ್ಟಾರ್ ರತ್ನಾಕರ ಹೆಗ್ಡೆಯವರು ಬಜೆಟ್ ಬಗ್ಗೆ ತಮ್ಮ
ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.