ಜೆ ಸಿ ಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ”

ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮ ಘಟಕದ ನಿಯೋಜಿತ ಘಟಕಾಧ್ಯಕ್ಷರಾದ ಜೆಸಿ ಗಣೇಶ್ ಕೆ ಇವರ ಅದ್ಯಕ್ಷತೆಯಲ್ಲಿ ದಿನಾಂಕ 08/03/2022 ರಂದು ಶ್ರೀಮತಿ ವತ್ಸಲಾ ಕರ್ಕೇರ ಇವರ ನಿವಾಸದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ಹಾಗೂ ಲಯನ್ಸ್ ಕ್ಲಬ್ ಇದರಲ್ಲಿ ಉನ್ನತ ಹುದ್ದೆ ಯನ್ನು ಅಲಂಕರಿಸಿದ, ಹಲವಾರು ಸಮಾಜಮುಖಿ ಸೇವಾ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಂತಹ ಶ್ರೀಮತಿ ವತ್ಸಲಾ ಕರ್ಕೇರ ಇವರನ್ನು ಸನ್ಮಾನಿಸಲಾಯಿತು, ಘಟಕದ ಉಪಾಧ್ಯಕ್ಷ ಜೆಸಿ ಜೈದೀಪ್ ಅವರು ಸನ್ಮಾನಿತರ ಕಿರು ಪರಿಚಯ ವನ್ನು ಮಾಡಿದರು, ಘಟಕದ ಸ್ಥಾಪಕಧ್ಯಕ್ಷರಾದ ಎಂ. ಏನ್ . ನಾಯಕ್ ಅವರು ಜೆಸಿ ಆಂದೋಲನ ವು ಒಂದು ಉತ್ತಮ ತರಬೇತಿಗಳ ಜೀವಾಳ ಹಾಗೂ ನಾಯಕತ್ವವನ್ನು ಒಗ್ಗೂಡಿಸಿ ಕೊಳ್ಳಲು ಇರುವ ಅವಕಾಶಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು,
ಘಟಕದ ಕೋಶಾಧಿಕಾರಿ ಜೆಸಿ ಉಮೇಶ್ ಆಚಾರ್ಯ ಇವರು ಸಮಾಜ ದಲ್ಲಿ “ಮಹಿಳೆಯರ ಪ್ರಾಮುಖ್ಯತೆ “ಇದನ್ನು ತಮ್ಮ ಕವನ ದ ಮೂಲಕ ತಿಳಿಯಪಡಿಸಿದರು ಕಾರ್ಯದರ್ಶಿ ಜೆ ಸಿ ಗಣೇಶ್ ನಾಯ್ಕ್ ಧನ್ಯವಾದಗೈದರು.
ಈ ಸಂದರ್ಭದಲ್ಲಿ ಘಟಕದ ಜೆಜೆಸಿ ಚೇರ್ ಪರ್ಸನ್ ಜೆಜೆಸಿ ಯಶವಂತ್, ಜೆಸಿ ವೀಣಾ ನಾಗೇಶ್ ಜೆಜೆಸಿ ಪಂಚಮಿ ಹಾಗೂ ಹರೀಶ್ ಕುಂದರ್ ಮಸ್ಕತ್ ಇನ್ನಿತರರು ಉಪಸ್ಥಿತರಿದ್ದರು.