ಕರಾವಳಿ

ಅಂಬಾಗಿಲು: ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದ ಸಹೋದರಿಗೆ ಹಲ್ಲೆ

ಉಡುಪಿ : ತಾಯಿಯ ಆರೋಗ್ಯ ವಿಚಾರಿಸಲು ಮಂಗಳೂರಿನಿಂದ ಬಂದಿದ್ದ ಅನಿತಾ ಪಿಂಟೋ ಎಂಬವರಿಗೆ ಅವರ ತಮ್ಮನೇ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಅಂಬಾಗಿಲುವಿನಲ್ಲಿ ನಡೆದಿದೆ.
ಮಾ.8 ರಂದು ಅನಿತಾ ಪಿಂಟೋ ಅವರು ಮಂಗಳೂರಿನಿಂದ ತಾಯಿಯ ಆರೋಗ್ಯ ವಿಚಾರಿಸಲೆಂದು ಅಂಬಾಗಿಲುವಿನ ತಾಯಿಯ ಮನೆಗೆ ಬಂದಿದ್ದರು. ಈ ವೇಳೆ ಅನಿತಾ ಪಿಂಟೊ ಅವರ ತಮ್ಮ ರೋಶನ್‌ ಕರ್ನಲಿಯೋ ಅನಿತಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಚೂರಿಯಿಂದ ಇರಿಯಲು ಯತ್ನಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!