ರಾಷ್ಟ್ರೀಯ

ಪುಸ್ತಕ ಮೇಳದಲ್ಲಿ ಪಿಕ್​ ಪಾಕೆಟ್​ ಮಾಡಿ ಸಿಕ್ಕಿಬಿದ್ದ ನಟಿ -ವ್ಯಾನಿಟಿ ಬ್ಯಾಗ್ ನಲ್ಲಿತ್ತು ಹಲವರ ಪರ್ಸ್.!

ಕೋಲ್ಕತ್ತಾ : ಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಸ್ಥಳದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಕೋಲ್ಕತದ ಬಿಧನ್​ನಗರ ಉತ್ತರ ಪೊಲೀಸ್​ ಠಾಣೆಯ ಪ್ರಕಾರ, ಕಸದ ಬುಟ್ಟಿಗೆ ಮಹಿಳೆಯೂ ಬ್ಯಾಗ್​ ಎಸೆಯುವುದನ್ನು ನೋಡಿದ ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್​ ಸಿಬ್ಬಂದಿ ಅನುಮಾನಗೊಂಡು ವಿಚಾರಿಸಿದ್ದಾರೆ. ಆದರೆ ಆಕೆಯನ್ನು ಪೊಲೀಸರು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು. ಈ ಹಿನ್ನಲೆಯಲ್ಲಿ ತಪಾಸಣೆ ನಡೆಸಿದಾಗ ಆಕೆಯ ಬ್ಯಾಗ್‌ನಿಂದ ಹಲವಾರು ಪರ್ಸ್‌ಗಳು ಮತ್ತು ₹ 75,000 ನಗದು ಪತ್ತೆಯಾಗಿದೆ. ಆ ಬಳಿಕ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ. . ಸದ್ಯ ರೂಪಾ ದತ್ತ ಅವರನ್ನು ಪಿಕ್​ ಪಾಕೆಟ್​ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ನಟಿ ರೂಪಾ ಅಲ್ಲದೆ, ಮತ್ತಷ್ಟು ಜನರು ತಂಡವಾಗಿ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಸುಳ್ಳು ಆರೋಪ ಮಾಡಿ ರೂಪಾ ದತ್ತ ಸುದ್ದಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!