ಅಂತಾರಾಷ್ಟ್ರೀಯ
ಚೀನಾದ 19 ಪ್ರಾಂತ್ಯಗಳಲ್ಲಿ ಕೊರೋನಾ ಮತ್ತೆ ಸ್ಫೋಟ: ಲಾಕ್ ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಆರಂಭವಾಗಿದೆ. ಚೀನಾದ 19 ಪ್ರಾಂತ್ಯಗಳಲ್ಲಿ ಕೊರೋನಾ ಸ್ಫೋಟಗೊಂಡಿದೆ. ಕೊರೋನಾ ರೂಪಾಂತರಿ ತಳಿ ಒಮೈಕ್ರಾನ್ ಹಾವಳಿ ಹೆಚ್ಚಾಗಿದೆ. ಉತ್ತರ ಕೊರಿಯಾ ಗಡಿಗೆ ತಾಗಿಕೊಂಡಿರುವ ಚೀನಾದ ನಗರದಲ್ಲಿ ಕಟ್ಟು ನಿಟ್ಟಿನ ನಿರ್ಬಂಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಶಾಂಘೈ ಸೇರಿದಂತೆ 19 ಪ್ರಾಂತ್ಯಗಳಲ್ಲಿ ಕೊರೋನಾ ಮತ್ತೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಲಾಕ್ ಡೌನ್ ಜಾರಿ ಮಾಡಲಾಗಿದೆ.
ಭಾನುವಾರ ಚೀನಾದಲ್ಲಿ ಹೊಸದಾಗಿ 3400 ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿತ್ತು