ರಾಷ್ಟ್ರೀಯ
‘RBI’ ನಿಂದ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ : ಗೃಹ ಸಾಲ ಬಡ್ಡಿ ದರ ಇಳಿಕೆ

ನವದೆಹಲಿ : ಅಕ್ಟೋಬರ್ 1 ರಿಂದ ದೇಶದಲ್ಲಿ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.
ಬ್ಯಾಂಕುಗಳು ತಮ್ಮ ರಿಟೇಲ್ ಮತ್ತು ಎಂಎಸ್ಎಂಇ ಸಾಲಗಳನ್ನು ಬಾಹ್ಯ ಬಡ್ಡಿ ದರದ ಮಾನದಂಡಕ್ಕೆ ಲಿಂಕ್ ಮಾಡುವುದನ್ನು ಆರ್ ಬಿಐ ಕಡ್ಡಾಯ ಮಾಡಿದ್ದು, ಪರಿಣಾಮವಾಗಿ ಗೃಹ, ಕಾರು ವೈಯಕ್ತಿಕ ಸಾಲದ ಬಡ್ಡಿ ದರ ಇಳಿಕೆಯಾಗಲಿದೆ. ಜೊತೆಗೆ ಮಾಸಿಕ ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲ ದವರಿಗೆ ಎಸ್ ಬಿಐ ವಿಧಿಸುತ್ತಿದ್ದ ದಂಡದ ಪ್ರಮಾಣ ನಾಳೆಯಿಂದ ಇಳಿಕೆಯಾಗಲಿದೆ.