ಉಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸದ ವಿದ್ಯಾರ್ಥಿನಿಯರು ಟೆರರಿಸ್ಟ್ ಸಂಘಟನೆಯ ಸದಸ್ಯರು ಎಂಬುವುದನ್ನು ಸಾಬೀತು ಪಡಿಸಿದ್ದಾರೆ – ಯಶ್ಫಾಲ್ ಸುವರ್ಣ

ಉಡುಪಿ: ಹಿಜಾಬ್ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಯಶ್ಫಾಲ್ ಸುವರ್ಣ, ” ತೀರ್ಪನ್ನು ಸ್ವಾಗತಿಸಿ. ಆರು ಮಂದಿ ವಿದ್ಯಾರ್ಥಿನಿಯರು ಉಚ್ಚ ನ್ಯಾಯಾಲಯದ ತೀರ್ಪಿಗೆ ಗೌರವ ನೀಡದೆ ಅದನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಈ ಮೂಲಕ ಅವರು ಈ ಮುಂಚೆ ಹೇಳಿದಂತೆ ಟೆರರಿಸ್ಟ್ ಸಂಘಟನೆಯ ಸದಸ್ಯರು ಎಂಬುವುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಪು ಬಂದಿದ್ದು, ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿರುವ ವಿದ್ಯಾರ್ಥಿನಿಯರು ದೇಶದಲ್ಲಿ ಉಳಿಯಲು ಅರ್ಹರಲ್ಲ ಎಂದು ಹೇಳಿದರು. ಅವರಿಗೆ ಯಾವ ದೇಶದಲ್ಲಿ ಧರ್ಮ ಪಾಲನೆಗೆ ಅವಕಾಶ ಸಿಗುತ್ತದೆ ಅಲ್ಲಿಗೆ ಹೋಗಲಿ ಎಂದರು.ತೀರ್ಪನ್ನು ಗೌರವಿಸಿ ಕಾಲೇಜಿಗೆ ಬಂದರೆ ಸ್ವಾಗತ ಎಂದರು. ಇಲ್ಲಿ ಸಮಸ್ಯೆ ಸೃಷ್ಟಿಸಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡಬಾರದೆಂದು ಹೇಳಿದರು.
ಕಾನೂನನ್ನು ಗೌರವಿಸುತ್ತೇವೆ ಎಂದು ಹೈಕೋರ್ಟ್ ಮೆಟ್ಟಿಲೇರಿದವರು ಇದೀಗ ತೀರ್ಪನ್ನು ಒಪ್ಪುತ್ತಿಲ್ಲ ಎಂಬುವುದು ವಿಪರ್ಯಾಸ. ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಡ್ರ ನಿರ್ಮಾಣ ನಮ್ಮ ಮುಂದಿನ ಉದ್ದೇಶ ಎಂದು ಸ ಪ ಪೂ ಹೆಮ್ಮಕ್ಕಳ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ಫಾಲ್ ಸುವರ್ಣ ಹೇಳಿದರು.
ಹಲವು ಹೇಳಿಕೆ ಮೂಲಕ ಕರಾವಳಿ ಭಾಗದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಪ್ರಯತ್ನಿಸಿದ್ದೀರಾ. ನಿಮ್ಮನ್ನು ಸೇರಿ ಸಿ.ಎಫ್.ಐ. ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಬೇರನ್ನು ಕಿತ್ತು ಬಿಸಾಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದರು.