ಕಾರ್ಕಳ ಉತ್ಸವ : ಮಾ. 16ರ ಕಾರ್ಯಕ್ರಮಗಳ ವಿವರ

ಕಾರ್ಕಳ : ಕಾರ್ಕಳ ಉತ್ಸವದ ಏಳನೇ ದಿನವಾದ ಮಾ. 16ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.
ಮೆಹೆಂದಿ ಕಾರ್ಯಕ್ರಮ
ಮಾ. 18ರಂದು ನಡೆಯಲಿರುವ ಉತ್ಸವ ಮೆರವಣಿಗೆಯ ಪೂರ್ವಭಾವಿಯಾಗಿ ಮಾ. 16 ಮನೆಮನೆಯಲ್ಲಿ ಮೆಹೆಂದಿ ಎಂಬ ಕಾರ್ಯಕ್ರಮಕ್ಕೆ ಸಚಿವ ಸುನಿಲ್ ಕುಮಾರ್ ಕರೆ ಕೊಟ್ಟಿದ್ದಾರೆ.
ಗೂಡುದೀಪ ಉತ್ಸವ
ಶಾಲಾ ಮಕ್ಕಳಿಗೆ ಗೂಡುದೀಪದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾ. 16ರಂದು ಗೂಡುದೀಪ ಉತ್ಸವ ಸ್ವರಾಜ್ ಮೈದಾನ ಬಳಿಯ ಸುಂದರ ಪುರಾಣಿಕ ಶಾಲೆಯಲ್ಲಿ ನಡೆಯಲಿದೆ. ಕಾರ್ಕಳ ಕ್ಷೇತ್ರದ 1 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರತೀ ಶಾಲೆಯಿಂದ ತಲಾ ಒಂದು ಗೂಡುದೀಪದ ನೊಂದಾವಣೆಯೊಂದಿಗೆ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಯ ಗೂಡುದೀಪಗಳಲ್ಲದೇ ಮಂಗಳೂರು ನಮ್ಮ ಕುಡ್ಲದ ತಂಡದಿಂದ ಸುಮಾರು 100 ದೊಡ್ಡ ಗಾತ್ರದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪಗಳ ಪ್ರದರ್ಶನವಿರಲಿದೆ.
ಬುಲೆಟ್ ರ್‍ಯಾಲಿ
ಕಾರ್ಕಳ ಉತ್ಸವಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಕಳದ ಉತ್ಸಾಹಿ ಯುವಕರಿಂದ ಸಂಜೆ 4:30 ಗಂಟೆಗೆ ಬುಲೆಟ್ ರ್‍ಯಾಲಿ ನಡೆಯಲಿದೆ. ರ್‍ಯಾಲಿ ಸಚಿವ ಸುನಿಲ್ ಕುಮಾರ್ ಅವರ ಕಚೇರಿಯಿಂದ ಹೊರಟು ಜೋಡುರಸ್ತೆ, ಬಸ್ ನಿಲ್ದಾಣ, ಅನಂತಶಯನ, ಆನೆಕೆರೆಯಾಗಿ ಗಾಂಧಿ ಮೈದಾನ ತಲುಪಲಿದೆ.
ಸ್ವರಾಜ್ಯ ಮೈದಾನಲ್ಲಿ ಸಂಜೆ 6.30 ರಿಂದ ಬೆಂಗಳೂರು ಚಿದಾನಂದ ಕುಲಕರ್ಣಿ ಮತ್ತು ತಂಡದಿಂದ ಜಾನಪದ ವೈವಿದ್ಯ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಹಾಸ್ಯ
ಸಂಜೆ 6 ರಿಂದ 8.15ರ ವರೆಗೆ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ, ಗಂಗಾವತಿ ನರಸಿಂಹ ಜೋಷಿ, ಯಶವಂತ ಸರದೇಶಪಾಂಡೆ ಅವರಿಂದ ಕನ್ನಡ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
ರಾತ್ರಿ 8.15ರಿಂದ 8.45 ವರೆಗೆ ರಾಜಸ್ಥಾನ ರಾಜ್ಯದ ಚಡಯ್ ನೃತ್ಯ, ತೇರಾತಾಲಿನೃತ್ಯ, ಕಾಶ್ಮೀರ ರಾಜ್ಯದ ರೌಫ್ ನೃತ್ಯ, ವಚನಾಗಿಮಾ ನೃತ್ಯ, ಮಹಾರಾಷ್ಟ್ರ ರಾಜ್ಯದ ತರ್ಪಾ ನೃತ್ಯ ಕಾರ್ಯಕ್ರಮ ನಡೆಯಲಿದೆ.
ತುಳು ನಾಟಕ
ರಾತ್ರಿ 8.45 – 10.45 ರ ವರೆಗೆ ದೇವದಾಸ್ ಕಾಪಿಕಾಡ್ ರವರ “ನಮಸ್ಕಾರ ಮಾಸ್ಟ್ರೇ” ತುಳು ಹಾಸ್ಯಮಯ ನಾಟಕ ನಡೆಯಲಿದೆ.