ತಾಜಾ ಸುದ್ದಿಗಳುರಾಜ್ಯ
ಆಕಸ್ಮಿಕವಾಗಿ ಮನೆಯ ಬಾಗಿಲು ತಲೆಗೆ ಬಡಿದು ವ್ಯಕ್ತಿ ಸಾವು!!

ಮೈಸೂರು: ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಮನೆಯ ಬಾಗಿಲಿಗೆ ತಲೆ ಬಡಿದು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಜನತಾನಗರದ ನಿವಾಸಿ ಶಿವಣ್ಣ (31) ಎಂದು ಗುರುತಿಸಲಾಗಿದೆ. ಈತ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು.
ಜೂನ್ 30ರಂದು ಮದ್ಯ ಸೇವನೆ ಮಾಡಿ ರಾತ್ರಿ ಮಲಗಿದ್ದಾರೆ. ಮಧ್ಯರಾತ್ರಿ ನೀರು ಕುಡಿಯಲು ಎದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು, ಬಾಗಿಲು ಮತ್ತು ಗೋಡೆಗೆ ತಲೆ ಬಡಿದಿದೆ. ಇದರಿಂದ ಗಾಯಗೊಂಡ ಇವರು ನಂತರ ಕೆ.ಆರ್.ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ಗಳನ್ನು ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.