ಅಂತಾರಾಷ್ಟ್ರೀಯ
ಚೀನಾದಲ್ಲಿ ಕೊರೋನಾ ಅಬ್ಬರ, ಲಾಕ್ ಡೌನ್ ಜಾರಿ

ಬೀಜಿಂಗ್: ಚೀನಾದ ಹುವಾನ್ ಪ್ರಾಂತ್ಯದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸಲಾಗಿತ್ತು. ಆದರೆ ಚೀನಾದಲ್ಲಿ ಇದೀಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ.
ವುಹಾನ್ ಬಳಿಕ ಇದೇ ಮೊದಲ ಬಾರಿಗೆ ಚೀನಾದ ನಗರವೊಂದರಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಚೀನಾದ ಶಿಯಾನ್ ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ಶಿಯಾನ್ ನಗರದ ಒಟ್ಟು ಜನಸಂಖ್ಯೆ 1. 3 ಕೋಟಿ. ಶಿಯಾನ್ ನಗರದಲ್ಲಿ ಹೊಸದಾಗಿ 55 ಕೊರೋನಾ ಸೋಂಕು ಪ್ರಕರಣ ವರದಿಯಾಗಿದೆ. ಡಿಸೆಂಬರ್ 9 ಬಳಿಕ ಶಿಯಾನ್ ನಗರದಲ್ಲಿ 145 ಪ್ರಕರಣ ವರದಿಯಾಗಿದೆ.
ಎಲ್ಲರೂ ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಮನೆಯ ಒಬ್ಬ ಸದಸ್ಯನಿಗೆ ಎರಡು ದಿನಗಳಲ್ಲಿ ಒಮ್ಮೆ ಹೊರಗಡೆ ಹೋಗಿ ಅಗತ್ಯ ವಸ್ತು ಖರೀದಿಸಲು ಅನುಮತಿ ನೀಡಲಾಗಿದೆ.