ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ

ಸರಕಾರವು 18 ರಿಂದ 44 ವರ್ಷದ ಆಯ್ದ ಗುಂಪುಗಳಿಗೆ ಕೋವಿಡ್-19 ಲಸಿಕಾಕರಣ ಪ್ರಾರಂಭಿಸುವ ಕುರಿತು ಆದೇಶಿಸಲಾಗಿದ್ದು, ಅದರಂತೆ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇದರ ನೋಡೆಲ್ ಅಧಿಕಾರಿಯಾಗಿ ಅಪರಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಅವರನ್ನು ನೇಮಿಸಲಾಗಿದ್ದು, ಲಸಿಕೆ ನೀಡುವ ಕುರಿತ ಅನೆಕ್ಸರ್-3 ನ್ನುಅಪರ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ, ಮಣಿಪಾಲ ಉಡುಪಿ ಇಲ್ಲಿಂದ ಪಡೆಯಬಹುದಾಗಿದೆ.
ಅನೆಕ್ಸರ್-3 ಪಡೆಯಲು, ಅರ್ಜಿಯೊಂದಿಗೆ, ಆಧಾರ್ ಕಾರ್ಡು, ಪಾಸ್ ಪೋರ್ಟ್, ವೀಸಾ, ವ್ಯಾಸಂಗದ ಬಗ್ಗೆ ವಿದ್ಯಾ ಸಂಸ್ಥೆಯ ಪತ್ರ (ಆಫರ್ ಲೆಟರ್) ಇವುಗಳ ಮೂಲಪ್ರತಿ ಹಾಗೂ ಸ್ವಯಂ ದೃಢೀಕರಿಸಿದ ಜೆರಾಕ್ಸ್ ಪ್ರತಿಯೊಂದಿಗೆ ಕಚೇರಿಯನ್ನು ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ: 0820-2574802 ಅಥವಾ 1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.