ಕರಾವಳಿ
ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಇಬ್ಬರು ಸಜೀವ ದಹನ

ಕಾಪು: ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಕಾಪು ತಾಲೂಕಿನ ಮಲ್ಲಾರು ಪಕೀರಣಕಟ್ಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆಯೊಂದು ಇಂದು ನಡೆದಿದೆ.
ಮೃತರನ್ನು ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಹಾಗೂ ರಜಾಕ್ ಮಲ್ಲಾರ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಪಾಲುದಾರ ಹಸನಬ್ಬ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಅಗ್ನಿಶಾಮಕ ದಳ, ಅದಾನಿ – ಯುಪಿಸಿಎಲ್ ಅಗ್ನಿಶಾಮಕವಾಹನ, ಐ.ಎಸ್.ಪಿ.ಆರ್.ಎಲ್ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.
ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹಬ್ಬುತ್ತಿದ್ದು ಸುತ್ತಮುತ್ತಲಿನ ಮನೆ, ವಸತಿ ಸಮುಚ್ಚಯ, ಮಸೀದಿಗೂ ಹಾನಿಯುಂಟಾಗುವ ಭೀತಿ ಎದುರಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.