ಅಂತಾರಾಷ್ಟ್ರೀಯ

ಚೀನಾದಲ್ಲಿ ಬೋಯಿಂಗ್ ವಿಮಾನ ಪತನ: 133 ಪ್ರಯಾಣಿಕರ ಸಾವಿನ ಭೀತಿ

ಬೀಜಿಂಗ್: 133 ಪ್ರಯಾಣಿಕರಿದ್ದ ಬೋಯಿಂಗ್ 737 ಚೀನಾದ ಈಸ್ಟರ್ನ್ ಪ್ಯಾಸೆಂಜರ್ ಜೆಟ್ ನೈಋತ್ಯ ಚೀನಾದಲ್ಲಿ ಅಪಘಾತಕ್ಕೀಡಾಗಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಚೀನಾದ ಪ್ರಾದೇಶಿಕ ಮಾಧ್ಯಮಗಳು ವರದಿ‌ ಮಾಡಿವೆ.

ಸಿಸಿಟಿವಿ ವರದಿ ಪ್ರಕಾರ – ಬೋಯಿಂಗ್ 737 ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಟೆಂಗ್ ಕೌಂಟಿ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು”ಪರ್ವತಗಳ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ಅಪಘಾತಕ್ಕ ಕಾರಣ ಮತ್ತು ಸಾವು ನೋವುಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!