ರಾಷ್ಟ್ರೀಯ
ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ, ಕರಾಚಿಯಲ್ಲಿ ಲ್ಯಾಂಡಿಂಗ್

ನವದೆಹಲಿ: ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಸುತ್ತಿದ್ದ ಕತಾರ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ.
ವಿಮಾನವನ್ನು ಇದೀಗ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದತ್ತ ತೆರಳಲು ಸೂಚಿಸಲಾಗಿದೆ. ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ ಎಂಬ ವರದಿಗಳು ಬಂದಿವೆ.
ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು. ತಾಂತ್ರಿಕ ತೊಂದರೆ ಕಂಡು ಬಂದ ಕೂಡಲೇ ಪೈಲಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು