ವಜ್ರದುಂಬಿ ಗೆಳೆಯರ ಬಳಗ ಬಿಜೂರು ಇವರ ಆಶ್ರಯದಲ್ಲಿ ಕೆಎಂಸಿ ಮಣಿಪಾಲ ಹೆಚ್ಚುವರಿ ನುರಿತ ವೈದ್ಯರ ಮೂರು ತಂಡದಿಂದ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ ಉಚಿತ ಔಷಧ ವಿತರಣೆ

ವಜ್ರದುಂಬಿ ಗೆಳೆಯರ ಬಳಗ ಬಿಜೂರು ಇವರ ಆಶ್ರಯದಲ್ಲಿ ಕೆಎಂಸಿ ಮಣಿಪಾಲ ಹೆಚ್ಚುವರಿ ನುರಿತ ವೈದ್ಯರ ಮೂರು ತಂಡದಿಂದ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಔಷಧಿ ವಿತರಣೆ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು.
ಖ್ಯಾತ ಚರ್ಮರೋಗ ತಜ್ಞರಾದ ಡಾ. ಸತೀಶ್ ಪೈ ಶಿಬಿರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ವಜ್ರದುಂಬಿ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಉದ್ಯಮಿ ಶ್ರೀ ಬಿ. ಜಿ. ಲಕ್ಷ್ಮೀಕಾಂತ್ ಬೆಸ್ಕೂರ್,ಅಧ್ಯಕ್ಷರಾದ ಶ್ರೀ ರಾಘವೇಂದ್ರ ಬೈಟು,ಆಧ್ಯಾತ್ಮ ಚಿಂತಕರಾದ ಶ್ರೀ ಹರೀಶ್ ತೋಳಾರ್ ಕೊಲ್ಲೂರು,ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗ,ವಜ್ರದುಂಬಿ ಗೆಳೆಯರ ಬಳಗದ ಕಾನೂನು ಸಲಹೆಗಾರರಾದ ಶ್ರೀ ರಾಘವೇಂದ್ರ ವಕೀಲರು,ಸನಾತನ ಗೆಳೆಯರ ಬಳಗದ ಶ್ರೀ ರಾಘವೇಂದ್ರ ಶೆಟ್ಟಿ ಹೇರಂಜಾಲು,ವಜ್ರದುಂಬಿ ಗೆಳೆಯರ ಬಳಗದ ಗೌರವ ಸಲಹೆಗಾರರಾದ ಶ್ರೀ ಮಂಜು ದೇವಾಡಿಗ ಅರೆಹಾಡಿ ಹಾಗೂ ವಜ್ರದುಂಬಿ ಗೆಳೆಯರ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.ಶ್ರೀ ನರಸಿಂಹ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು ಸುಮಾರು 300ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.