ಕರಾವಳಿ
ತೀರ್ಥಹಳ್ಳಿ:ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು

ತೀರ್ಥಹಳ್ಳಿ: ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ತೀರ್ಥಹಳ್ಳಿಯ ತುಂಗಾ ನದಿಯ ರಾಮ ಮಂಟಪದ ಬಳಿ ನಡೆದಿದೆ.
ತುಂಗಾ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ವರ್ಧನ್ (19) ಹಾಗೂ ಸೊನಲೆಯ ಮಂಜು (20) ನೀರು ಪಾಲಾದವರು.
ನಿನ್ನೆ ಮಧ್ಯಾಹ್ನ ಇಬ್ಬರೂ ತುಂಗ ನದಿಯಲ್ಲಿ ಈಜಲು ಹೋಗಿದ್ದರು. ನಂತರ ಅವರು ನಾಪತ್ತೆಯಾಗಿದ್ದರು. ಬಳಿಕ ಮೊಬೈಲ್ ಲೊಕೇಶನ್ ಪರಿಶೀಲಿಸಿ ತೆರಳಿದಾಗ ನದಿ ಬಳಿ ಇಬ್ಬರ ಯೂನಿಫಾರ್ಮ್ ಮತ್ತು ಮೊಬೈಲ್ ಪತ್ತೆಯಾಗಿತ್ತು.
ಅಗ್ನಿಶಾಮಕದಳ, ಪೊಲೀಸರ ಸತತ ಹುಡುಕಾಟದಿಂದ ಶವ ನದಿಯಿಂದ ಹೊರ ತೆಗೆಯಲಾಗಿದೆ. ಘಟನೆಯಿಂದ ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.