ಕರಾವಳಿ
ಸೀಲ್ ಡೌನ್ ಹೇರಿರುವ ಪಂಚಾಯತ್ ವ್ಯಾಪ್ತಿಯಲ್ಲಿ 5 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇಲ್ಲ: ಜಿಲ್ಲಾಧಿಕಾರಿ

ಉಡುಪಿ: ಮುಂದಿನ 5 ದಿನ ಸಂಪೂರ್ಣ ‘ ಸೀಲ್ ಡೌನ್’ ಹೇರಿರುವ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ವಸ್ತುಗಳ ಖರೀದಿಗೆ ಮತ್ತು ಇತರ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಹಾಲು, ಮೆಡಿಕಲ್ ಮತ್ತು ಕ್ಲಿನಿಕ್ ಶಾಪ್ ಗಳಿಗೆ ಮಾತ್ರ ತೆರೆಯಲು ಅವಕಾಶವಿದ್ದು ಇತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಕುರಿತು ವೀಡಿಯೋ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ 50+ ಪಾಸಿಟಿವ್ ಇರುವ ಗ್ರಾಮಗಳನ್ನು ಐದು ದಿನಗಳ ಕಾಲ ಸೀಲ್ ಡೌನ್ ವಿಧಿಸಲು ನಿರ್ಣಯಿಸಲಾಗಿದೆ. ಜೂನ್ 2 ರಿಂದ 7 ರತನಕ ಈ ಕ್ರಮ ಜಾರಿಯಲ್ಲಿರಲಿದೆ.