ರಾಜ್ಯ
ವೇಶ್ಯಾವಾಟಿಕೆ ಪ್ರಕರಣ ಸಂಬಂಧ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು :ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದು ಆ ಮನೆಯ ಮಾಲೀಕನಿಗೆ ಅರಿವಿಲ್ಲದಿದ್ದರೆ ಆ ಕೃತ್ಯಕ್ಕೆ ಮಾಲೀಕ ಹೊಣೆಯಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದು ಮನೆ ಮಾಲೀಕನಿಗೆ ಅರಿವಿದ್ದರೆ ಮಾತ್ರ ಆತ ಅಪರಾಧಿ ಎನಿಸುತ್ತಾನೆ. ಇಲ್ಲವಾದರಲ್ಲಿ ಈ ಕೃತ್ಯಕ್ಕೂ ಮಾಲೀಕನನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ನ ಏಕ ಸದಸ್ಯ ಪೀಠ ಹೇಳಿದೆ.
ಬೆಂಗಳೂರಿನ ನಾಗರಭಾವಿಯ ಮನೆಯೊಂದರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.