ರಾಷ್ಟ್ರೀಯ
Trending

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರೈಜಿ ನಿಧನ !

ಮುಂಬೈ: ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟರ್ ರಾಗಿದ್ದ  ವಸಂತ್ ರೈಜಿ (100) ಮುಂಬೈನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾರಣದಿಂದ ರೈಜಿ ಅವರು ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.ಇವರ ಅಂತಿಮ ವಿಧಿಗಳು ದಕ್ಷಿಣ ಮುಂಬೈನ ಚಂದನ್ವಾಡಿ ಶವಾಗಾರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಬಲಗೈ ಬ್ಯಾಟ್ ಮ್ಯಾನ್ ರಾಗಿದ್ದ  ವಸಂತ್ ರೈಜಿ 40ರ ದಶಕದಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಈ ಸಮಯದಲ್ಲಿ ಅವರು 277 ರನ್ ಗಳಿಸಿದ್ದರು. ಅವರ ವೈಯಕ್ತಿಕ ಗರಿಷ್ಠ 68 ರನ್ ಗಳಿಸಿದ್ದರು. ರೈಜಿ 1939 ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದರು.

ಕ್ರಿಕೆಟರ್ ಅಷ್ಟೇ ಅಲ್ಲದೆ ರೈಜಿ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು. ಅವರು 13 ವರ್ಷದವರಿದ್ದಾಗ ಬಾಂಬೆ ಜಿಮ್ಖಾನಾದಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದ್ದರು. ಈ ವರ್ಷ 100ನೇ ವಸಂತಕ್ಕೆ ಕಾಲಿಟ್ಟಿದ್ದ ಅವರಿಗೆ ಅನೇಕ ಕ್ರಿಕೆಟರ್, ಅಭಿಮಾನಿಗಳು ಶುಭಕೋರಿದ್ದರು. ಅಷ್ಟೇ ಅಲ್ಲದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರು ರೈಜಿ ಅವರ ಹುಟ್ಟುಹಬ್ಬವನ್ನು ಆಚರಿಸಲು  ಭೇಟಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!