ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ದೇವಸ್ಥಾನ ಮಣ್ಣಗುಡ್ಡ, ಮಂಗಳೂರು. ಭಜನಾ ಮಂಗಳೂತ್ಸವ.

ತಾ . 28-03-2022 ನೇ ಸೋಮವಾರದಂದು ಶ್ರೀ ಮಡಕೈ ನವದುರ್ಗ ಮಹಾಗಣಪತಿ
ದೇವಸ್ಥಾನದಲ್ಲಿ ಜರುಗಿದ 15ನೇ ವಾರ್ಷಿ ಕ ಭಜನಾ ಮಂಗಳೋತ್ಸವ ಮಂಗಳೂರಿನ ಡೆಪ್ಯೂಟಿ ಡೈರೆಕ್ಟರ್ ಆಫ್ ಇಂಡಸ್ಟ್ರೀಸ್ನ ನ ಶ್ರೀ ಗೋಕುಲ್ ದಾಸ್ ನಾಯಕ್ ಜಿ ಎಸ್ ಬಿ ಸೇವಾ ಸಂಘದ ಅಧ್ಯಕ್ಷ ಮೋಹನ್ ಪೈ , ಐ.ಸಿ.ಎ.ಐ ಮಾಜಿ ಅಧ್ಯಕ್ಷ ಸಿ.ಎ ಎಸ್ಎಸ್ ನಾಯಕ್, ಜಿ ವಿಶ್ವನಾಥ್ ಭಟ್ ಆಡಳಿತ ಮೊಕ್ತೇಸರ ಇವರಿಂದ ದೀಪ ಬೆಳಗಿಸುವ ಮೂಲಕ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಭಗವದ್ ಭಕ್ತರಾದ ಪಿ ಸುರೇಶ ಶೆಣೈ, ಮನುಕುಮಾರ್ , ನಾಗರಾಜ್ ಶಾನಭೋಗ, ಪ್ರಫುಲ್ ಸತ್ಯ ಕುಮಾರ್ ಜಿ ಸತೀಶ್ ಭಟಿ ,ಜಿ ಕಾರ್ತಿಕ್ ಭಟ್, ಶಂಕರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪ್ರಥಮ ಭಜನಾ ಸೇವೆಯೇಯು ಮಂಗಳೂರಿನ ಶ್ರೀ ವೀರ ವೆಂಕಟೇಶ ಯುವ ಭಜನಾ ಮಂಡಳಿಯ ಸಂಕೀರ್ತನೆ ಯೊಂದಿಗೆ ಆರಂಭಗೊಂಡಿತ್ತು ಆನಂತರ ಮಂಗಳೂರು ಇತರ 10 ಭಜನಾ ಮಂಡಳಿಗಳಿಂದ ಸಂಕೀರ್ತನ ಸೇವೆ ನೆರವೇರಿತು.
ದಿನಾಂಕ 29 – 3 – 2022 ನೇ ಮಂಗಳವಾರ ಮಂಗಲೋತ್ಸವ ಪ್ರಯುಕ್ತ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ತನಕ ಶ್ರೀ ಸುದರ್ಶನ ಇವರಿಂದ ಸಂಕೀರ್ತನ , ಆರತಿ ಹಾಗೂ ಭೋಜನ ಪ್ರಸಾದ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಶ್ರೀ ಜಿ ಸತೀಶ್ ಭಟ್ ತಿಳಿಸಿರುತ್ತಾರೆ .