ಕರಾವಳಿ

ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಕೊವೀಡ್ ಸಂದರ್ಭದಲ್ಲಿ ಇಡೀ ದೇಶವೇ
ಕಷ್ಟದಲ್ಲಿರುವಾಗ ತಮ್ಮ ಜೀವ ಪಣಕ್ಕಿಟ್ಟು, ಕರ್ತವ್ಯ
ನಿರ್ವಹಿಸಿದ ಮಹತ್ತರವಾದ ಪಾತ್ರ ಆರೋಗ್ಯ ಸಿಬ್ಬಂದಿ ಮತ್ತು ನೌಕರದ್ದಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡುವುದು ಒಂದು ಅತ್ಯುತ್ತಮ ಕೆಲಸವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಭಿಪ್ರಾಯಪಟ್ಟರು.

ಅವರು ಇಂದು ನಗರದ ಅಂಬಲಪಾಡಿಯ ಶ್ಯಾಮಿಲಿ
ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್
ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ
ನಡದ ಕೋವಿಡ್ ವಾರಿಯರ್ಸ್ ರವರಿಗೆ
ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿದರು.

ಜನರಿಗೆ ಕೋವಿಡ್ ರೋಗದ ಬಗ್ಗೆ ಮಾಹಿತಿ ನೀಡುವುದು ಹಾಗೂ ಪ್ರತಿ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಕೋವಿಡ್ ಸೋಂಕಿತರನ್ನು ಪತ್ತೆಹಟ್ಟಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕೋವಿಡ್ ವಾರಿಯರ್ಸ್ ಸಫಲರಾಗಿದ್ದಾರೆ.

ಇವರಿಂದಾಗಿ  ಜಿಲ್ಲೆಯಲ್ಲಿ ಪ್ರಸ್ತುತ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಲಸಿಕಾಕರಣದ ವಿಷಯದಲ್ಲಿಯೂ ಮನೆಗಳಿಗೆ ತೆರಳಿ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಿದ ಗರಿಮೆ ಕೂಡ ಕೋವಿಡ್ ವಾರಿಯರ್ಸ್ ಗೆ ಸಲ್ಲುತ್ತದೆ ಎಂದರು.

ಎಲ್ಲಾ ಕೋವಿಡ್ ವಾರಿಯರ್ಸ್ ಗಳ ಸೇವೆ
ಸ್ಮರಣೀಯವಾಗಿದ್ದು, ಪ್ರತಿಯೊಬ್ಬರೂ ಕೂಡ ಗೌರವಕ್ಕೆ ಅರ್ಹರು ಎಂದು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕೋವಿಡ್ ವಾರಿಯರ್ಸ್ ಸೇವೆಗೆ ನಾವೆಲ್ಲರೂ ಅಭಾರಿಗಳಾಗಿದ್ದೇವೆ.

ಎಲ್ಲಾ  ಆರೋಗ್ಯ ಸಿಬ್ಬಂದಿ, ದಾದಿಯರು, ನೌಕರರು ಜಿಲ್ಲೆಯಲ್ಲಿ
ಕೋವಿಡ್ ನಿಯಂತ್ರಣದ ಬೆನ್ನೆಲುಬಾಗಿದ್ದರು.
ಕೋವಿಡ್ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದ
ಸಂದರ್ಭದಲ್ಲಿ ದಿನದ ಎರಡೂ ಪಾಳಿಯಲ್ಲಿ ಕೂಡ
ಸೇವೆ ಸಲ್ಲಿಸಿ, ಕೋವಿಡ್ ನಿಯಂತ್ರಣಕ್ಕೆ ಶ್ರಮ
ವಹಿಸಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಹಾಗೂ
ಲಸಿಕೆಯ ಬಗ್ಗೆ ಅರಿವು ಮೂಡಿಸುವಲ್ಲಿ
ಸಫಲರಾಗಿದ್ದಾರೆ. ಮುಂದೆಯೂ ಕೂಡಾ ಕೋವಿಡ್
ವಾರಿಯರ್ಸ್‌ ಸೇವೆ ಹೀಗೆ ಮುಂದುವರೆಯಬೇಕು
ಎಂದು ಹೇಳಿದರು.

ಪ್ರಸಾದ್ ನೇತ್ರಾಲಯದ ಡಾ. ಪ್ರಸಾದ್‌ ಮಾತನಾಡಿ,
ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ನೌಕರರ ಸೇವೆ
ಅಪಾರವಾಗಿದ್ದು, ಪ್ರಸಾದ್ ನೇತ್ರಾಲಯದಲ್ಲಿ
ಆರೋಗ್ಯ ಸಿಬ್ಬಂದಿ ಹಾಗೂ ನೌಕರರು ಮತ್ತು ಅವರ
ಕುಟುಂಬಗಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು
ಚಿಕಿತ್ಸೆ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿಗಳು ಆರೋಗ್ಯ  ವೀಕ್ಷಣಾಧಿಕಾರಿಗಳು, ದಾದಿಯರು,, ಪ್ರಯೋಗ ಶಾಲಾ ತಂತ್ರಜ್ಞರು, ದತ್ತಾಂಶ ನಮೂದಕರು ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂರಕ್ಷಣಾಧಿಕಾರಿಗಳು, ಚಾಲಕರು ಹಾಗೂ ನೌಕರರಿಗೆ ಪ್ರಶಸ್ತಿ ಪತ್ರ ನೀಡಿ‌ ಅಭಿನಂದಿಸಲಾಯಿತು ಹಾಗೂ ಕೋವಿಡ್ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಸ್ವಯಂ ಪ್ರೇರಿತವಾಗಿ ಸೇವೆ ಸಲ್ಲಿಸಿದ ಇತರ ಸರ್ಕಾರೇತರ ಸಂಘ   ಸಂಸ್ಥೆಗಳನ್ನು ಗೌರವಿಸಲಾಯಿತು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.
ಶ್ರೀರಾಮರಾವ್, ಜಿಲ್ಲಾ ಆರ್.ಓಹ್ ಅಂತರಿ .
ಎಂ.ಜಿ.ರಾಮ, ಜಿಲ್ಲಾಸರ್ವೇಕ್ಷಣಾಧಿಶರಿಡ.
ನಾಗರತ್ಯ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ
ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ನ್ ಆದರ್ಶ
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಚಂದ್ರಶೇಖರ
ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ
ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜಿಲ್ಲಾ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ
ಶೇರಿಗಾರ್ ವಂದಿಸಿದರು. ಡಾ. ಪ್ರಶಾಂತ್ ಶೆಟ್ಟಿ
ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!