ಕರಾವಳಿ

ಯಕ್ಷಗಾನ ನೋಡಲು ಹೋದ ವ್ಯಕ್ತಿ ನಾಪತ್ತೆ..!

ಉಡುಪಿ: ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ನಿವಾಸಿ
ತುಕಾರಾಮ ಶೆಟ್ಟಿಗಾರ್ (52 ವರ್ಷ) ಎಂಬುವರು ಮಾರ್ಚ್ 29
ರಂದು ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಳಿ
ಯಕ್ಷಗಾನ ನೋಡಲು ಹೋದವರು ವಾಪಾಸು ಮನೆಗೆ ಬಾರದೇ
ನಾಪತ್ತೆಯಾಗಿರುತ್ತಾರೆ.
5ಅಡಿ 2 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ,
ಹೊಂದಿದ್ದು, ಕನ್ನಡ, ತುಳು ಮಲೆಯಾಳಿ ಮತ್ತು ಹಿಂದಿ ಭಾಷೆ
ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು
ಪೋಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ:
9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:
08254-251031, ಮೊ.ನಂ: 9480805434, ಕಂಟ್ರೋಲ್ ರೂಂ
100 (0820-2526444) ಅನ್ನು ಸಂಪರ್ಕಿಸುವಂತೆ ಕೊಲ್ಲೂರು
ಪೋಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!