ಬಿಲ್ಲವರ ಸೇವಾ ಸಂಘ (ರಿ) ಸಂತೆಕಟ್ಟೆ, ಕಲ್ಯಾಣಪುರ – ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠೆ – ಗುರು ಮಂದಿರ ಉದ್ಘಾಟನೆ – ಸಮುದಾಯ ಭವನ ಶಿಲಾನ್ಯಾಸ

ಬಿಲ್ಲವರ ಸೇವಾ ಸಂಘ (ರಿ) ಸಂತೆಕಟ್ಟೆ, ಕಲ್ಯಾಣಪುರ ಸಂಘದ ನಿವೇಶನ ನಯಂಪಳ್ಳಿ ಇಲ್ಲಿ ಇಂದು ದಿನಾಂಕ 03-04-2022 ರಂದು ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠೆ, ಗುರು ಮಂದಿರದ ಉದ್ಘಾಟನೆ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಗುರು ಮಂದಿರದ ಉದ್ಘಾಟನೆ ನೆರವೇರಿಸಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಕೇರಳ ವರ್ಕಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಮತ್ತು ಪ್ರಣಮಾನಂದ ಸ್ವಾಮೀಜಿ ಆಶೀರ್ವಚಿಸಿದರು.
ಸಂತೆಕಟ್ಟೆ ಬಿಲ್ಲವರ ಸೇವಾ ಸಂಘ (ರಿ) ಅಧ್ಯಕ್ಷರಾದ ಶೇಖರ್ ಗುಜ್ಜರಬೆಟ್ಟು, ಮಾಂಡವಿ ಬಿಲ್ಡರ್ಸ್ ನ ಜೆರಿ ದಯಾಸ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಬಿ.ಎನ್. ಶಂಕರ್ ಪೂಜಾರಿ, ಸ್ಥಳೀಯ ನಗರಸಭಾ ಸದಸ್ಯರಾದ ಮಂಜುಳಾ ನಾಯಕ್, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಕರ ಎ. ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜನಾರ್ದನ ತೋನ್ಸೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.