ರಾಷ್ಟ್ರೀಯ
ಇಂದಿನ ಕೋರೋನ್ ಪ್ರಕಾರ ವಿವರ

ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ
ಇಳಿಮುಖವಾಗಿದೆ. ಇಂದು ಕೂಡ 1000ಕ್ಕಿಂತ ಕಡಿಮೆ
ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 795
ಕೊರೋನಾ ಸೋಂಕು ಪ್ರಕರಣ ವರದಿಯಾಗಿದೆ
ಇದೇ ಅವಧಿಯಲ್ಲಿ ಕೊರೋನಾ ವೈರಸ್ ಸೋಂಕಿನಿಂದ
58ಮಂದಿ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿತರಾಗಿದ್ದ
1,208 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ
12,054 ಸಕ್ರಿಯ ಪ್ರಕರಣಗಳಿದ್ದು, ನಿತ್ಯದ ಕೋವಿಡ್
ಪಾಸಿಟಿವಿಟಿ ದರ ಶೇ. 0.17ಕ್ಕೆ ಇಳಿಕೆಯಾಗಿದೆ.
ದೇಶದಲ್ಲಿ ಇದುವರೆಗೆ 5,21,416 ಮಂದಿ ಕೋವಿಡ್ನಿಂದ
ಸಾವಿಗೀಡಾಗಿದ್ದಾರೆ.