ಉಡುಪಿ ಎಟಿಎಂನಲ್ಲಿ ಕಳವಿಗೆ ಯತ್ನಿಸಿದ ಆರೋಪಿ ಅರೆಸ್ಟ್

ಉಡುಪಿ,: ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್ ಎಟಿಎಂ ಲಾಕರ್ ಡೋರ್ ಮುರಿದು ಕಳವಿಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆಯ ಹನುಮಂತ (19) ಎಂದು ಗುರುತಿಸಲಾಗಿದೆ.
ಎಟಿಎಂ ಲಾಕರ್ ಡೋರ್ ಮುರಿದು ಕಳವು ಮಾಡಲು ಪ್ರಯತ್ನಿಸಿರುವ ಕುರಿತು ಇಲೆಕ್ಟ್ರಾನಿಕ್ ಪೆಮೆಂಟ್ ಸರ್ವಿಸ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ, ಉಡುಪಿ ಮತ್ತು ಮಂಗಳೂರಿನ ಕೆನರಾ ಬ್ಯಾಂಕ್ ಎಟಿಎಂ ಶಾಖೆಗಳಿಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿರುವ ಸೈಮನ್ ಡಿ ಸೋಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆಗೆ ಹೋಗಿ ಆರೋಪಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ದಸ್ತಗಿರಿ ನಿಯಮ ಪಾಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಐ.ಪಿ.ಎಸ್, ಉಡುಪಿ ರವರ ಆದೇಶದಂತೆ, ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪಿ.ಎಸ್.ಐ-1 ಮಹೇಶ್ ಟಿ.ಎಮ್, ಪಿ.ಎಸ್.ಐ-2 ವಾಸಪ್ಪ ನಾಯ್ಕ್, ಎಎಸ್‌ಐ ವಿಜಯ ಸಿ ಹಾಗೂ ಸಿಬ್ಬಂದಿಯವರಾದ, ಸತೀಶ, ಕಿರಣ್, ಸಂತೋಷ ರಾಠೋಡ್ ರವರು ಭಾಗವಹಿಸಿದ್ದಾರೆ.