ಮಂಗಳೂರು ಹಾಡಹಗಲೇ ರಸ್ತೆಯಲ್ಲಿ ಹೊತ್ತಿ ಉರಿದ ಬೈಕ್ ಹಾಗೂ ಸಿಟಿ ಬಸ್

ಮಂಗಳೂರು: ಖಾಸಗಿ ಬಸ್ಸೊಂದು ಹೊತ್ತಿ ಉರಿದ
ಘಟನೆ ನಗರದ ಹಂಪನಕಟ್ಟೆಯ ಬಳಿ ಶುಕ್ರವಾರ ಇಂದು ಮಧ್ಯಾಹ್ನ ನಡೆದಿದೆ.
ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕ
ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ,
ಬೆಂಕಿ ಹೊತ್ತಿಕೊಂಡಿದ್ದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮಂಗಳೂರು ನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.
ಕೈಕಂಬದಿಂದ ನಗರದ ಸ್ಟೇಟ್ ಬ್ಯಾಂಕ್ ಗೆ ಬರುತ್ತಿದ್ದಾಗ ಬೈಕ್ ವೊಂದು ಅಡ್ಡ ಬಂದಿದ್ದು, ಈ ವೇಳೆ ಬಸ್ಸಿನ ಟಯರ್ ನಡಿ ಬೈಕ್ ಸೀಲುಕಿಕೊಂಡು ಬೆಂಕಿ ಹೊತ್ತಿಕೊಂಡಿದೆ.
ಗಾಯಗೊಂಡ ಬೈಕ್ ಸವಾರನನ್ನು ಬಳ್ಳಾಲ್ ಬಾಗ್ ನಿವಾಸಿ ಡೈಲಾನ್ ಎಂದು ಗುರುತಿಸಲಾಗಿದ್ದು, ಹಂಪನಕಟ್ಟೆಯಿಂದ ವೆಲೆನ್ಸಿಯಾ ಕಡೆ ತೆರಳುತ್ತಿದ್ದ ಎನ್ನಲಾಗಿದೆ ರಾಂಗ ರೂಟ್ ನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ ಅಪಘಾತದಲ್ಲಿ ಡೈಲಾನ್ ಕಾಲಿಗೆ ಗಂಭೀರ ಗಾಯಗಳಾಗಿವೆ
ಬಸ್ ನಲ್ಲಿ 15ಕ್ಕೂ ಅಧಿಕ ಪ್ರಯಾಣಿಕರು ಇದ್ದರು
ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಎಲ್ಲಾ
ಪ್ರಯಾಣಿಕರು ಬಸ್ ನಿಂದ ಇಳಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಹೊತ್ತು ಈ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು.