ಕರಾವಳಿ
ಮಂಗಳೂರು: ಮಗುವಿನ ಅಶ್ಲೀಲ ವಿಡಿಯೋ ಪ್ರಸಾರ- ಸ್ವಯಂಪ್ರೇರಿತ ಪ್ರಕರಣ ದಾಖಲು

ಮಂಗಳೂರು : ಮಗುವಿನ ಅಶ್ಲೀಲ ವಿಡಿಯೋ ಡೌನ್ ಲೋಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಹಿನ್ನಲೆಯಲ್ಲಿ ಸೈಬರ್ ಪೊಲೀಸರು ಆರೋಪಿ ರಾಂಬಾಬು ರಾಬಿದಾಸ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ನಾಪತ್ತೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ದಿಂದ ಸೈಬರ್ ಟಿಪ್ ಲೈನ್ ದೂರನ್ನು ಸಿಐಡಿ ಪಡೆದಿದ್ದು, ಅದನ್ನು ಮಂಗಳೂರು ನಗರ ಸೈಬರ್ ಠಾಣೆಗೆ ಕಳುಹಿಸಿಕೊಟ್ಟಿತ್ತು. ಅದನ್ನು ಪರಿಶೀಲಿಸಿದ ಸೈಬರ್ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ 2021 ರ ಜ.9 ರಂದು ಮಗುವಿನ ಅಶ್ಲೀಲ ವಿಡಿಯೋ ಡೌನ್ ಲೋಡ್ ಮಾಡಿ ಅದನ್ನು ವಾಟ್ಸ್ ಆಪ್ ಮೂಲಕ ಪ್ರಸಾರ ಮಾಡಿದ್ದ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.