ಐಪಿಎಲ್ ಬೆಟ್ಟಿಂಗ್ ಅಡ್ಡೆಗೆ ಪೊಲೀಸರ ದಾಳಿ : ವ್ಯಕ್ತಿಯೊಬ್ಬ ಪೊಲೀಸರಿಗೆ ಹೆದರಿ ಓಡುವಾಗ ಕಾಲುಜಾರಿ ಬಿದ್ದು ಸಾವು

ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಈ ಮಾಹಿತಿ ಮೇರೆಗೆ ರಾಯಚೂರು ಯರಗೇರಾ ಠಾಣೆ ಪೊಲೀಸರು ವಡವಟ್ಟಿ ಗ್ರಾಮದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆ ವೇಳೆಯಲ್ಲಿ ಪೊಲೀಸರು ಎಲ್ಲಿ
ಬಂಧಿಸುತ್ತಾರೋ ಎಂದು ಹೆದರಿ ಓಡುವಾಗ ಕಾಲುಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಸ್ವಾಮಿ(35) ಎಂದು ತಿಳಿದು ಬಂದಿದೆ. ಈತ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.
ಪೋಲೀಸರ ದಾಳಿಗೆ ಹೆದರಿ ಓಡಿ ಹೋಗಲು ಯತ್ನಿಸಿದಾಗ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಐಪಿಎಲ್ ಬೆಟ್ಟಿಂಗ್ ಹಾಗೂ ವ್ಯಕ್ತಿ ಸಾವಿನ ಬಗ್ಗೆ ಪ್ರತ್ಯೇಕ ಎರಡು ಪ್ರಕರಣಗಳು ಯರಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವ್ಯಕ್ತಿ ಸಾವು ಅಸಹಜ ಸಾವು ಅಂತ ಪ್ರಕರಣ ದಾಖಲಾಗಿದ್ದು, ಐಪಿಎಲ್ ಬೆಟ್ಟಿಂಗ್ ದಾಳಿಗೂ ವ್ಯಕ್ತಿ ಸಾವಿಗೂ ಸಂಬಂಧವಿಲ್ಲ. ಎರಡು ಪ್ರತ್ಯೇಕ ಘಟನೆಗಳು ಮೃತನ ಕುಟುಂಬಸ್ಥರು ಸುಳು
ಆರೋಪ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.