ರಾಜ್ಯ
ಎಸ್‌ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕೊಡಿಸದಿದ್ದರೆ ರಾಜೀನಾಮೆಗೆ ಸಿದ್ದ’ – ಶ್ರೀರಾಮುಲು

ವಿಜಯಪುರ : ಎಸ್‌ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿಯನ್ನು ನೀಡದೇ ಇದ್ದರೆ, ನನ್ನ ರಾಜೀನಾಮೆಯಿಂದ ಸಮಸ್ಯೆ ಬಗೆ ಹರಿಯಲಿದೆ ಎಂದಾದರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ಬಿ.ಶ್ರೀರಾಮುಲು ಘೋಷಿಸಿದ್ದಾರೆ.
ಎಸ್ ಟಿ ಮೀಸಲಾತಿ ಹೋರಾಟದ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲೇ ಶೇ.7.5ರಷ್ಟು ಮೀಸಲಾತಿ ಕೊಡಿಸುವಂತ ಪ್ರಯತ್ನ ಮಾಡುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ ಮೀಸಲಾತಿ ಕೊಡಿಸಿಯೇ ತೀರುತ್ತೇನೆ ಎಂದರು.
ಇನ್ನು ಎಸ್ ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕೊಡದೇ ಇದ್ದರೇ, ನಮ್ಮ ಸರ್ಕಾರದ ಅವಧಿಯಲ್ಲೇ ಕೊಡಿಸೋ ಕೆಲಸವನ್ನು ನಾನು ಮಾಡದೇ ಇದ್ದಲ್ಲಿ, ನಾನು ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂದು ಘೋಷಿಸಿದ್ದಾರೆ.