ಕರಾವಳಿ
ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರವತಿಯಿಂದ 50 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರ 2ನೆಯ ಹಂತದ ಸೇವಾ ಕಾರ್ಯ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಊಟಕ್ಕೂ ಕಷ್ಟಪಡುತ್ತಿರುವ ಸಂಕಷ್ಟದಲ್ಲಿರುವ 50 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ದಿನ ನಿತ್ಯ ಉಪಯೋಗಕ್ಕೆ ಬರುವ ಸಾಮಗ್ರಿಗಳನ್ನು ನೀಡಲಾಯಿತು. ಈ ಪುಣ್ಯ ಕಾರ್ಯಕ್ಕೆ ಕೆಲವು ದಾನಿಗಳು ಧನ ಸಹಾಯ ಮಾಡಿರುತ್ತಾರೆ. ಇವರಿಗೆ ಗಿಡ ನೀಡಿ ಟ್ರಸ್ಟಿನ ಪರವಾಗಿ ಧನ್ಯವಾದ ತಿಳಿಸಲಾಯಿತು.
ವಿಶೇಷ ಏನಂದ್ರೆ ಫೋಟೋಗೋಸ್ಕರ ಸೇವೆ ಮಾಡುವ ಈ ಕಾಲದಲ್ಲಿ ಯಾವ ಅಸಹಾಯಕರಿಗೆ ಕಿಟ್ ಕೊಡುವ ಫೋಟೋ ತೆಗೆಯದೇ ಬರೀ ಅವರ ಮನೆಗೆ ತಲುಪಿಸುವ ಪ್ರಯತ್ನ ನಿಸ್ವಾರ್ಥ ಸೇವಾ ಟ್ರಸ್ಟಿನ ಅರ್ಥವನ್ನು ಹೆಚ್ಚಿಸಿದೆ.
ವರದಿ : ಹರೀಶ್ ರಾಜ್