ರಾಷ್ಟ್ರೀಯ
ಆರರಿಂದ ಹನ್ನೆರಡು ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಬಳಕೆಗೆ ಅನುಮತಿ

ನವದೆಹಲಿ: ಕೊರೋನಾ ನಾಲ್ಕನೆ ಅಲೆಯ ಭೀತಿ
ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಆರರಿಂದ 12 ವರ್ಷದ ಮಕ್ಕಳಿಗೆ
ಕೊರೋನಾ ಲಸಿಕೆ ನೀಡಲು ಡಿಸಿಜಿಐ ಅನುಮತಿ ನೀಡಿದೆ.
ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ
ಅನುಮತಿ ನೀಡಿದೆ. ಈ ಮಧ್ಯೆ ಕೊರೋನಾ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಲು ಪ್ರಧಾನಿ ಮೋದಿ ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ