ಕರಾವಳಿ
ಆದಿಉಡುಪಿ : ಪೊಲೀಸ್ ಪೇದೆಯೊಬ್ಬರು ರೈಫಲ್ ನಿಂದ ಗುಂಡಿಕ್ಕಿ ಆತ್ಮಹತ್ಯೆ.!

ಉಡುಪಿ : ನಗರದ ಆದಿಉಡುಪಿ ಫ್ರೌಢಶಾಲೆ ಪೊಲೀಸ್ ಪೇದೆಯೊಬ್ಬರು ರೈಫಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ ರಾಜೇಶ್ ಕುಂದರ್ ಎಂದು ತಿಳಿದು ಬಂದಿದೆ.
ಆದಿಉಡುಪಿ ಶಾಲೆಯಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಕಾವಲು ಕರ್ತವ್ಯಕ್ಕೆ ಹಾಕಿದ್ದರು.ರಾತ್ರಿ ವೇಳೆಯಲ್ಲಿ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ .
ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.