ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆಯ ಟಿ.ಡಿ.ಆರ್ ಹಂಚಿಕೆ ಕುರಿತು ಸಭೆ

ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣಕ್ಕೆ ಉಡುಪಿಯಲ್ಲಿ ಪ್ರಥಮ ಬಾರಿಗೆ ಟಿ.ಡಿ.ಆರ್. ಪ್ರಕ್ರಿಯೆ ಮೂಲಕ ಭೂಸ್ವಾಧೀನದ ಪಡಿಸಿಕೊಳ್ಳಲಾಗಿದ್ದು, ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಟಿ.ಡಿ.ಆರ್ ಹಂಚಿಕೆ ಸಂಬಂಧ ಶಾಸಕ ಕೆ. ರಘುಪತಿ ಭಟ್ ಅವರು ಇಂದು ದಿನಾಂಕ 17-08-2021 ರಂದು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸಹಾಯಕ ಆಯುಕ್ತರಾದ ರಾಜು ಕೆ, ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರವಿ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಕಿರಿಯ ಅಭಿಯಂತರರಾದ ಸೋಮನಾಥ್, ನಗರ ಯೋಜನಾ ಸದಸ್ಯರಾದ ಗುರುಪ್ರಸಾದ್ ಎ. ಆರ್, ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕಿಶೋರ್ ಕುಮಾರ್, ದಿನಕರ್ ಪೂಜಾರಿ, ಸುಮಾ ನಾಯ್ಕ್, ನಾಮ ನಿರ್ದೇಶಿತ ಸದಸ್ಯರಾದ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಭಾರತಿ ಪ್ರಶಾಂತ್, ಸೆಲಿನಾ ಕರ್ಕಡ, ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ ಉಪಸ್ಥಿತರಿದ್ದರು.