ಬ್ರಹ್ಮಾವರ : ಕ್ಯಾನ್ಸರ್ ಕುರಿತು ಆರೋಗ್ಯ ಮಾಹಿತಿ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬ್ರಹ್ಮಾವರ: ಇಂಡಿಯನ್ ಕ್ಯಾನ್ಸರ್ ಸೊಸೈಟಿ
ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ
ಮಣಿಪಾಲ, ಸಂಪದ ಸಂಸ್ಥೆ ಉಡುಪಿ, ಕಥೋಲಿಕ್
ಸ್ತ್ರೀ ಸಂಘಟನೆ ಬಾರಕೂರು, ಕಥೊಲಿಕ್ ಸಭಾ
ಬಾರಕೂರು ಆರೋಗ್ಯ ಆಯೋಗ ಇವರ
ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಆರೋಗ್ಯ
ಮಾಹಿತಿ ಮತ್ತು ಉಚಿತ ವೈದ್ಯಕೀಯ ತಪಾಸಣಾ
ಶಿಬಿರ ಗುರುವಾರ ಸೈಂಟ್ ಪೀಠರ್ ಚರ್ಚ್ ನಲ್ಲಿ
ಜರುಗಿತು.
ಚರ್ಚಿನ ಧರ್ಮಗುರು ಪಿಲೀಪ್ ನೇರಿ ಆರಾನ್ಹಾ
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಕೆ ಎಂ ಸಿಯ ಡಾ.ಗಹನ್ ಮಾತನಾಡಿ,
ಜಗತ್ತಿನ ಅದೆಷ್ಟೋ ಖಾಯಿಲೆಯಂತೆ ಕ್ಯಾನ್ಸರ್
ಕೂಡಾ ಒಂದು ಇದನ್ನು ಆರಂಭದಲ್ಲಿ ಕಂಡುಕೊಂಡು
ಗುಣ ಮುಖರಾಗ ಬಹುದು ಹಲವಾರು ಜನರು
ಕೊನೆಯ ಹಂತದಲ್ಲಿ ಬಂದು ಹತಾಶರಾಗುತ್ತಾರೆ.
ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮಾಡಿದಲ್ಲಿ
ನಿಯಂತ್ರಣ ಮಾಡಿ ಗುಣಮುಖರಾಗ ಬಹುದು
ಎಂದರು.
ಡಾ ರತ್ನಾ, ಡಾ, ಆಶಿಷ್, ಚರ್ಚ್ ನ ಪಾಲನಾ
ಮಂಡಳಿಯ ಹೆರಾಲ್ಡ್ ಡಿ ಸೋಜ, ಜೂಡಿ ಶೈಲ
ಲೋಬೋ, ಏರಿಕ್ ಸೋನ್ಸ್, ಕಥೋಲಿಕ್ ಸ್ತ್ರೀ
ಸಂಘಟನೆಯ ಶೈಲ ಡಿ’ಸೋಜಾ, ಸಂಪದ ಸಂಸ್ಥೆಯ
ಫಾದರ್ ರೆಜಿನಾಲ್ಡ್ ಪಿಂಟೋ,ವಿವೇಟ್ ಲೂವೀಸ್
ಇನ್ನಿತರರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಕ್ಯಾನ್ಸರಿಗೆ ಸಂಬಂಧಿಸಿದ
ಕಾರಣಗಳು ಮತ್ತು ಅದರಿಂದ ಆಗುವ ತೊಂದರೆ
ಕುರಿತು ಪರದೆಯಲ್ಲಿ ಬಿತ್ತರಿಸಲಾಗಿತ್ತು.
100 ಕ್ಕೂ ಅಧಿಕ ಮಂದಿ ಭಾಗವಹಿಸಿ ತಪಾಸಣೆ
ಮಾಡಿಕೊಂಡು ಶಿಭಿರದಲ್ಲಿ ಪ್ರಯೋಜನ ಪಡೆದರು.