ರಾಷ್ಟ್ರೀಯ
ದೇಶದಲ್ಲಿ ಹೆಚ್ಚಿದ ಉಷ್ಣ ಹವೆ: ಎಲ್ಲೆಲ್ಲೂ ಬಿಸಿಲಿನ ಅಬ್ಬರ

ನವದೆಹಲಿ: ದೇಶದಲ್ಲಿ ಉಷ್ಣ ಹವೆ ಜಾಸ್ತಿಯಾಗಿದೆ. ಹಲವು ರಾಜ್ಯಗಳಲ್ಲಿ 47 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಜನ ಕಂಗಾಲಾಗಿದ್ದಾರೆ. ನಿನ್ನೆ (ಏ.29)
ಉತ್ತರಪ್ರದೇಶದ ಬಂಡಾದಲ್ಲಿ ಗರಿಷ್ಠ 47.4 ಡಿ.ಸೆ,
ಪ್ರಯಾಗ್‌ರಾಜ್‌ನಲ್ಲಿ 47 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಇನ್ನು ಅಲಹಾಬಾದ್‌ನಲ್ಲಿ 46.8 ಡಿ.ಸೆ., ದಾಖಲಾಗಿದೆ. ಇನ್ನು ರಾಜಸ್ಥಾನದ ಧೋಲ್‌ಪುರದಲ್ಲಿ 46.5, ಶ್ರೀಗಂಗಾನಗರದಲ್ಲಿ
46.4,ಸಂಗಾರಿಯಾದಲ್ಲಿ 46 ಡಿ.ಸೆ ದಾಖಲಾಗಿದೆ.
ಮುಂದಿನ 5 ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಬಿಸಿಯ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.