ಕರಾವಳಿ
ಮಲ್ಪೆ ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಪತ್ತೆ

ಉಡುಪಿ: ಮಲ್ಪೆ ಕಡಲ ತೀರದಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಇಂದು ಪತ್ತೆಯಾಗಿದೆ.
ಮೃತಳನ್ನು ಕೊಡುಗು ಮೂಲದ ದೇಚ್ಚಮ್ಮ ಎಂದು ಗುರುತಿಸಲಾಗಿದೆ. ಈಕೆ ಮೈಸೂರಿನ ಸ್ನೇಹಿತ ಹಾಗೂ ಕೊಡಗು ಮೂಲದ ಮೂವರು ಯುವತಿಯರೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆಯನ್ನು ಉಲ್ಲಂಘಿಸಿ ನಾಲ್ವರು ನೀರಿಗೆ ಇಳಿದಿದ್ದರು.
ಈ ವೇಳೆ ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ದೇಚಮ್ಮ ಮಾತ್ರ ನೀರಿನಲ್ಲಿ ನಾಪತ್ತೆಯಾಗಿದ್ದರು. ಇಂದು ಯುವತಿಯ ಮೃತದೇಹ ಮಲ್ಪೆ ಬೀಚ್ನ ಸೀವಾಕ್ ಬಳಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.