ರಾಷ್ಟ್ರೀಯ
ಇಂದಿನ ಕೋರೋನಾ ಪ್ರಕರಣ ವಿವರ

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಸಂಖ್ಯೆ ನಿನ್ನೆಗಿಂತ (ಏ.30) ಶೇ.10ರಷ್ಟು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,324 ಕೋವಿಡ್
ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4,30,79,188ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ಒಂದು ದಿನದಲ್ಲಿ 2,876 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,25,36,253 ಮಂದಿ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ.0.71 ರಷ್ಟಿದ್ದು, ಚೇತರಿಕೆ ಪ್ರಮಾಣ 98.74 ರಷ್ಟಿದೆ. ಒಟ್ಟು 19,092 ಸಕ್ರಿಯ ಪ್ರಕರಣಗಳಿವೆ. 24ಗಂಟೆಯಲ್ಲಿ 40 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಸಂಖ್ಯೆ 5,23,845ಕ್ಕೆ ತಲುಪಿದೆ. ವ್ಯಾಕ್ಸಿನೇಷನ್ ಡ್ರೈವ್ ಅಡಿ ಒಟ್ಟು ಲಸಿಕೆಯ ಡೋಸ್‌ಗಳ ಸಂಖ್ಯೆ 189.17 ಕೋಟಿ ಆಗಿದೆ ಎಂದು ಸಚಿವಾಲಯ ತಿಳಿಸಿದೆ.