ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟ್ ನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ…!

ಉಡುಪಿ : ಆದಿಉಡುಪಿ ಪ್ರೌಢಶಾಲೆಯ ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ರಾಜೇಶ್ ಕುಂದರ್ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು,ಆ ಡೆತ್ ನೋಟ್ ನಲ್ಲಿ ಮೂರು ಮಂದಿಯ ಹೆಸರು ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಬ್ಯಾಗ್ ಒಂದರಲ್ಲಿ ರಾಜೇಶ್ ಕುಂದರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜೇಶ್ ಕುಂದರ್ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಮೂರು ಮಂದಿ ಕಾರಣ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆ ಡೆತ್ ನೋಟ್ ನಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗಳಾದ ಉಮೇಶ್, ಮಹಮ್ಮದ್ ಆಶ್ಫಕ್ ಹಾಗೂ ಗಂಗೊಳ್ಳಿ ಎಸ್.ಐ ನಂಜ ನಾಯ್ಕ ಕಾರಣ ಎಂದು ಹೆಸರು ಉಲ್ಲೇಖ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಅದರಲ್ಲಿ ಇನ್ನೊಬ್ಬರು ಕೊಡ ತನಗೆ ಹಿಂಸೆ ನೀಡಿದ್ದಾರೆ ಎಂದು ರಾಜೇಶ್ ಕುಂದರ್ ಹೇಳುತ್ತಿದ್ದರು ಎಂದು ತಿಳಿಯಲಾಗಿದೆ. ಇನ್ನೊಬ್ಬರು ಯಾರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.
ಈ ಡೆತ್ ನೋಟ್ ಆಧಾರದಲ್ಲಿ ಉಡುಪಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ.