ರಾಷ್ಟ್ರೀಯ

ನವಜಾತ ಶಿಶುಗಳಿಗೆ ಆಸ್ಪತ್ರೆಯಲ್ಲಿಯೇ ಆಧಾರ್ ಕಾರ್ಡ್

ನವದೆಹಲಿ: ಹುಟ್ಟಿದ ಕೂಡಲೇ ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೀಘ್ರವೇ ಇದು ಕಾರ್ಯ ರೂಪಕ್ಕೆ ಬರುವ ವಿಶ್ವಾಸವನ್ನು ವಿಶಿಷ್ಟ ಗುರುತು ಚೀಟಿಯ ಪ್ರಾಧಿಕಾರದ ಸಿ ಇ ಒ ಸೌರಭ್ ಗಾರ್ಗ್ ವ್ಯಕ್ತಪಡಿಸಿದ್ದಾರೆ.

ಮಗುವಿನ ಫೋಟೋ ಕ್ಲಿಕ್ಕಿಸಿದ ಕೂಡಲೇ ಆಧಾರ್ ಕಾರ್ಡ್ ದೊರೆಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ದೇಶದ ವಯಸ್ಕರ ಪೈಕಿ ಶೇಕಡ 99. 7 ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಮಗು ಹುಟ್ಟಿದ ಕೂಡಲೇ ನಾಮಕರಣ ಶಾಸ್ತ್ರ ಮಾಡುವುದಿಲ್ಲ. ಪ್ರತಿಯೊಂದು ಸಮುದಾಯ ಈ ಸಂಬಂಧ ತನ್ನದೇ ಆದ ಸಂಪ್ರದಾಯ ಹೊಂದಿದೆ. ಇದು ಹುಟ್ಟಿದ ಕೂಡಲೇ ಮಕ್ಕಳಿಗೆ ಆಧಾರ್ ಕಾರ್ಡ್ ನೀಡುವ ಯೋಜನೆಗೆ ಸವಾಲು ತಂದೊಡ್ಡುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!