ಕರಾವಳಿ
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಸ್; ಸವಾರ ಸಾವು

ಕಾರ್ಕಳ:ಬೈಕ್ ಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ
ಸಾವನ್ನಪಿದ ಘಟನೆ ಜಾರ್ಕಳ ಜಂಕ್ಷನ್ ಬಳಿ
ನಡೆದಿದೆ.ಮಹಾಲಿಂಗ ಎಂಬುವರು ಮೃತಪಟ್ಟ ದುರ್ದೈವಿ.
ಮಹಾಲಿಂಗ ಅವರು ಸಹಾಸವರಾರೋರ್ವರನ್ನು
ಕುಳ್ಳಿರಿಸಿಕೊಂಡು ಬೈಕ್ ನಲ್ಲಿ ಎರ್ಲಪ್ಪಾಡಿ ರಸ್ತೆ ಕಡೆಯಿಂದ ಜಾರ್ಕಳ ರಸ್ತೆ ಕಡೆಗೆ ಬರುತ್ತಿರುವಾಗ ಜಾರ್ಕಳ ಜಂಕ್ಷನ್ ತಲುಪುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ K.S.R.T.C ಬಸ್ಸನ್ನು ಅದರ ಚಾಲಕ ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ಮಹಾಲಿಂಗರವರ ಬೈಕ್ ಗೆ ಡಿಕ್ಕಿ
ಹೊಡೆದಿದ್ದಾನೆ.
ಪರಿಣಾಮ ಬೈಕ್ ಸವಾರರಿಬ್ಬರು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಬೈಕ್ ಜಖಂಗೊಂಡಿದ್ದು, ಮಹಾಲಿಂಗರವರು ಧರಿಸಿದ ಹೆಲ್ಮಟ್ ಕೂಡ ಜಖಂಗೊಂಡಿತ್ತು
ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ
ದಾಖಲಾಯಿಸಲಾಯಿತಾದರೂ ಮಹಾಲಿಂಗರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.