ರಾಜ್ಯ
ಸ್ಯಾಂಡಲ್ವುಡ್ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ..!

ಬೆಂಗಳೂರು : ಕನ್ನಡ ಚಿತ್ರರಂಗ ಖ್ಯಾತ ನಟ, ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ನಿಧನರಾಗಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆ.
ಜೋಗಿ ಸಿನಿಮಾ , ಕೆ ಜಿಎಫ್ ಸೇರಿದಂತೆ ಹಲವು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ ಹಾಸ್ಯ ನಟನಾಗಿ ಮಿಂಚಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.