ಅಂತಾರಾಷ್ಟ್ರೀಯ

ಇಸ್ರೇಲ್ ಪಡೆಯಿಂದ ಅಲ್ ಜಜೀರಾ ಹಿರಿಯ ಪತ್ರಕರ್ತೆಯ ಹತ್ಯೆ

ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲಿ ದಾಳಿಯನ್ನು ವರದಿ ಮಾಡುತ್ತಿದ್ದ ಅಲ್ ಜಜೀರಾ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ಲರ್ ರನ್ನು ಇಸ್ರೇಲ್ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು
ವರದಿಯಾಗಿದೆ.

ಅಲ್‌ಜಜೀರಾದ ಅರೇಬಿಕ್ ಸುದ್ದಿ ಸೇವೆಯ ಪ್ರಮುಖ ಸಿಬ್ಬಂದಿಯಾಗಿದ್ದ 51 ವರ್ಷದ ಅಬು ಅಕ್ಷೆಹ್ರಿಗೆ ಉದ್ದೇಶಪೂರ್ವಕವಾಗಿ ಇಸ್ರೇಲ್ ಪಡೆಗಳು ಗುಂಡು ಹಾರಿಸಿದೆ ಎಂದು ಅಲ್‌ಜಜೀರಾ ಸುದ್ದಿ ಸಂಸ್ಥೆ ಆರೋಪಿಸಿದೆ.

ಉತ್ತರ ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನ್ ಸಶಸ್ತ್ರ
ಗುಂಪುಗಳ ಭದ್ರಕೋಟೆಯಾದ ಜೆನಿನ್ ನಿರಾಶ್ರಿತರ
ಶಿಬಿರದಲ್ಲಿ ಬುಧವಾರ ಮುಂಜಾನೆ ಕಾರ್ಯಾಚರಣೆ
ನಡೆಸಿರುವುದಾಗಿ ಇಸ್ರೇಲಿ ಸೇನೆ ದೃಢಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!