ಅಂತಾರಾಷ್ಟ್ರೀಯ
ಸೌದಿ ಅರೇಬಿಯಾದಲ್ಲಿ 14 ಕೋಟಿಗೆ ಮಾರಾಟವಾದ ಒಂಟೆ
ಸೌದಿ ಅರೇಬಿಯಾದಲ್ಲಿ ಅತ್ಯಂತ ದುಬಾರಿಯಾಗಿ
ಒಂಟೆಯನ್ನು ಮಾರಾಟ ಮಾಡಲಾಗಿದೆ. ಅದು ಈಗ ವಿಶ್ವದ ಅತ್ಯಂತ ಬೆಲೆಬಾಳುವ ಒಂಟೆಯಾಗಿದೆ. ಈ ಒಂಟೆಯನ್ನು ಸುಮಾರು 14 ಕೋಟಿ 23 ಲಕ್ಷ ನೀಡಿ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಒಂಟೆಗಳನ್ನು ಹರಾಜಿಗಿಟ್ಟು,
ಮಾರಾಟ ಮಾಡುತ್ತಾರೆ. ಇಲ್ಲಿ ಒಂಟೆಗಳಿಗೆ ಹೆಚ್ಚು ಬೇಡಿಕೆ. ಹಾಗಾಗಿ 14 ಕೋಟಿಗೆ ಮಾರಾಟವಾದ ಒಂಟೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.