ಉಡುಪಿ : ಗಿರಿಜಾ ಹೆಲ್ತ್ ಕೇರ್ ಮತ್ತು ಟೆಂಪಲ್ ಸೀಟಿ ಲಿಜನ್ ಉಡುಪಿ ಇದರ ಜಂಟಿ ಸಹಯೋಗದಿಂದ ವಿಶ್ವ ದಾದಿಯರ ದಿನ ಆಚರಣೆ.

ಉಡುಪಿ : ಉಡುಪಿ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಮತ್ತು ಜೆಸಿ ಉಡುಪಿ ಟೆಂಪಲ್ ಸಿಟಿ ಲಿಜನ್ ನ ಸಹಭಾಗಿತ್ವದಲ್ಲಿ ಸಂಸ್ಥೆಯ ಉಡುಪಿ ಮಂಗಳೂರು, ಕುಂದಾಪುರ ,ಶಾಖೆಗಳಲ್ಲಿ ಮೇ 13ರಂದು ವಿಶ್ವ ದಾದಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಿರಿಜಾ ಶಿವರಾಮ ಶೆಟ್ಟಿ, ಡಾಕ್ಟರ್ ವಿರೂಪಾಕ್ಷ ದೇವರ ಮನೆ, ನಮ್ಮ ಲಿಜನಿನ ಅಧ್ಯಕ್ಷರಾದ ಜಗದೀಶ್ ಕೆಮ್ಮಣ್ಣು ರಾಷ್ಟ್ರೀಯ ಅಧಿಕಾರಿಗಳಾದ ಚಿತ್ರ ಕುಮಾರ್, ವಿಜಯ್ ಕುಮಾರ್ ಉದ್ಯಾವರ ,ಕಾರ್ಯದರ್ಶಿ ಸಂತೋಷ್ ಕುಮಾರ್, ಗಿರಿಜಾ ಹೆಲ್ತ್ ಕೇರ್ ನ ಮಾಲಕರಾದ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿದ ನಿವೃತ್ತ ಹಿರಿಯ 10 ಜನ ದಾದಿಯರನ್ನು ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ ಉಡುಪಿ ,ಮಂಗಳೂರು, ಕುಂದಾಪುರ ,ಶಾಖೆಗಳಲ್ಲಿ ಹಿರಿಯ ದಾದಿಯರನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 20 ದಾದಿಯರನ್ನು ಗೌರವಿಸಲಾಯಿತು.
ಡಾಕ್ಟರ್ ವಿರೂಪಾಕ್ಷ ದೇವರ ಮನೆ ಇವರು ದಾದಿಯರ ದಿನಾಚರಣೆಯ ಮಹತ್ವದ ಬಗ್ಗೆ ವಿವರವಾಗಿ ಹೇಳಿದರು.
ಶ್ರೀಮತಿ ಗಿರಿಜಾ ಶಿವರಾಮ ಶೆಟ್ಟಿ ಅವರು ಎಲ್ಲರಿಗೂ ಶುಭಹಾರೈಸಿದರು. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದ ರವೀಂದ್ರ ಶೆಟ್ಟಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಡುಪಿ ಟೆಂಪಲ್ ಸಿಟಿ ಲಿಜನನ ನಿಕಟಪೂರ್ವ ಅಧ್ಯಕ್ಷರಾದ ಸುಕುಮಾರ್, ಉಪಾಧ್ಯಕ್ಷರಾದ ಅಲ್ವಿನ್ ಮಿನೇಜಸ್, ನಿರ್ದೇಶಕರಾದ ರವಿರಾಜ್ ದಯಾನಂದ್ ಶೆಟ್ಟಿ ,ತುಳಸಿದಾಸ್ ಉಪಸ್ಥಿತರಿದ್ದರು.
ಆರೋಗ್ಯ ಸೇವೆ ಸಲ್ಲಿಸುತ್ತಿರುವ ಎಲ್ಲಾ ನರ್ಸ್ ಗಳಿಗೆ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ ಸಂಸ್ಥೆಯಿಂದ ನರ್ಸ್ ಡೇ ಪ್ರಯುಕ್ತ ಬಂಪರ್ ಕೊಡುಗೆಯನ್ನು ನೀಡಲಾಗಿದ್ದು ಈ ಕೊಡುಗೆಯಲ್ಲಿ ನರ್ಸ್ ಗಳಿಗಾಗಿ ಗ್ಲುಕೋಮೀಟರ್ (ಮಧುಮೇಹ / ಶುಗರ್ ಅಳೆಯುವ ಉಪಕರಣ ) ಅನ್ನು ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದ್ದು 800 ರೂಪಾಯಿ ಮೌಲ್ಯದ ಗ್ಲುಕೋಮೀಟರ್ ಕೇವಲ 200 ರೂಪಾಯಿ ನೀಡಲಾಗುತ್ತಿದೆ. ಈ ಕೊಡುಗೆ ಮೇ ಇಪ್ಪತ್ತರವರೆಗೆ ಮಾತ್ರ ಲಭ್ಯವಿದ್ದು ಅರ್ಹ ನರ್ಸ್ ಗಳು ತಮ್ಮ ಐಡಿ ಕಾರ್ಡ್ ತೋರಿಸಿ ಇದರ ಸದುಪಯೋಗವನ್ನು ಪಡೆಯಬಹುದು.