
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ಟಿ ವೀಣಾ ಮತ್ತು ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಇಂಡಿಯಾ (ಡಿವೈಎಫ್ಐ) ರಾಷ್ಟ್ರ ಘಟಕದ ಅಧ್ಯಕ್ಷ ಮುಹಮ್ಮದ್ ರಿಯಾಸ್ ನಡುವಣ ವಿವಾಹ ಜೂನ್ 15 ಸೋಮವಾರದಂದು ನೆರವೇರಿದೆ.
ವಿಶೇಷ ವಿವಾಹ ಕಾಯ್ಡೆಯಡಿ ಸಿಎಂ ಮಗಳು ವೀಣಾ ಅವರ ಮದುವೆಯನ್ನು ರಿಜಿಸ್ಟರ್ ಮಾಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಇವರಿಬ್ಬರು ರಿಜಿಸ್ಟರ್ ಮದುವೆಯಾಗಿದ್ದಾರೆ. ಕೋವಿಡ್ ಮಾರ್ಗಸೂಚಿಯ ಅನ್ವಯ 50ಕ್ಕೂ ಕಡಿಮೆ ಮಂದಿ ಮಾತ್ರ ವಿವಾಹದಲ್ಲಿ ಭಾಗವಹಿಸಿದ್ದರು. ಟಿ ವೀಣಾ ಹಾಗೂ ಮುಹಮ್ಮದ್ ರಿಯಾಸ್ ಅವರಿಗಿದು ಎರಡನೇ ಮದುವೆಯಾಗಿದೆ. ತಿರುವನಂತಪುರದಲ್ಲಿರುವ ಕೇರಳ ಸಿಎಂ ನಿವಾಸ ಕ್ಲಿಫ್ ಹೌಸ್ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.
Kerala: T Veena, daughter of Chief Minister Pinarayi Vijayan, tied the knot with Mohammad Riyas, Democratic Youth Federation of India (DYFI) National President, today in Thiruvananthapuram. pic.twitter.com/7R4KWujRMT
— ANI (@ANI) June 15, 2020