ಕರಾವಳಿ

ಇಂದಿನಿಂದ ಸೈಂಟ್ ಮೇರಿಸ್ ಬೋಟ್ ಯಾನ, ಜಲಸಾಹಸ ಕ್ರೀಡೆ ಸ್ಥಗಿತ

ಮಲ್ಪೆ: ಅಸಾನಿ ಚೆಂಡ ಮಾರುತದಿಂದಾಗಿ ಕಡಲ ಅಬ್ಬರ
ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಕಡಲತೀರ, ಬೀಚ್ ಗಳಲ್ಲಿ
ಪ್ರವಾಸಿಗರು ನೀರಿಗಿಳಿಯದಂತೆ, ಜಲಸಾಹಸ ಕ್ರೀಡೆಗಳನ್ನು
ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಮೇ 8ರ
ಮಧ್ಯಾಹ್ನದಿಂದಲೇ ಬಹುತೇಕ ಕರಾವಳಿಯಲ್ಲಿ ಬೀಚ್
ನಿಷೇಧ ಮಾಡಲಾಗಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ, ರವಿವಾರ
ಬೆಳಗಿನಿಂದಲೇ ಹೆಚ್ಚಿನ ಪ್ರವಾಸಿಗರು ಮಲ್ಪೆ ಕಡೆಗೆ ಆಗಮಿಸಿದ್ದು ಬೀಚ್‌ನಲ್ಲಿ ಜನಸಂದಣಿ ಕಂಡು ಬಂದಿದೆ.

ಮಲ್ಪೆ ಸೀ ವಾಕ್ ಬಳಿ ಮತ್ತು ಮಲ್ಪೆ ಬೀಚ್ ನಿಂದ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೊರಡುವ ಪ್ರವಾಸಿ ಬೋಟ್ ಯಾನ  ಮತ್ತು ಬೀಚಿನಲ್ಲಿ  ನಡೆಯುವ ಜಲಸಾಹಸ
ಕ್ರೀಡೆಗಳನ್ನು ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಬವಾಗಿರುವ
ಹಿನ್ನೆಲೆಯಲ್ಲಿ  ಪ್ರತಿ ವರ್ಷದಂತ್ರ ಈ ವರ್ಷವೂ ಮೇ
16ರಿಂದ ಸಪ್ಟಂಬರ್ 15ರವರೆಗೆ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್. ಚಲಾಯಿಸಲು ಅನುಮತಿ ಇರುವುದಿಲ್ಲ,

ಹೆಚ್ಚಿನ  ಪ್ರವಾಸಿಗರು ಇಲ್ಲಿಗೆ ಬರುತ್ತಿರುವ ಕಾರಣ ಮತ್ತು
ಸಮುದ್ರ ಸಹಜ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ  ಇಲ್ಲಿನ
ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ
ಹೆಚ್ಚುವರಿ ದಿನಗಳ ಅವಕಾಶವನ್ನು ನೀಡುವಂತೆ
ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಜ. 1ರಿಂದ
ಪ್ರವಾಸಿಗರು ಕಡಲಿಗಿಳಿಯದಂತೆ ಬೀಚ್ ಉದ್ದಕ್ಕೂ
ನೆಟ್ ಗಳನ್ನು  ಅಳವಡಿಸಲಾಗುವುದು. ಒಂದು ವೇಳೆ  ಅವಧಿಗೆ ಮೊದಲೇ ಸಮುದ್ರದಲ್ಲಿ ಏರು-ಪೇರು  ಕಂಡು ಬಂದಲ್ಲಿ ಸೂಕ್ತ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ನಿರ್ವಾಹಕರು  ಬೀಚ ಅಭಿವೃದ್ಧಿ ಸಮಿತಿಯ  ಸುದೇಶ್ ಶೆಟ್ಟಿ  ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!