ರಾಷ್ಟ್ರೀಯ
ಮುಂಬೈನಲ್ಲಿ ಧಾರಾಕಾರ ಮಳೆ: ವಾಹನ, ಜನಸಂಚಾರಕ್ಕೆ ಅಡಚಣೆ

ಮುಂಬೈ(09.06.2021): ಮಹಾರಾಷ್ಟ್ರದಲ್ಲಿ ಬುಧವಾರ ಮುಂಜಾನೆಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಈ ಹಿನ್ನೆಲೆ ವಾಹನ, ಜನಸಂಚಾರಕ್ಕೆ ತುಂಬಾ ಅಡಚಣೆಯುಂಟಾಗಿದೆ.
ಸಿಯೊನ್ ರೈಲ್ವೆ ನಿಲ್ದಾಣ ಮತ್ತು ಜಿಟಿಬಿ ನಗರ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಹಳಿಗಳು ಮುಳುಗಿಹೋಗಿವೆ. ಮಳೆಯಿಂದಾಗಿ ಮುಂಬೈಯ ಕಿಂಗ್ಸ್ ಸರ್ಕಲ್ನಲ್ಲಿ ಹಲವು ಕಡೆ ವಾಹನಗಳು ಮುಳುಗಿವೆ.
ಮುಂದಿನ ನಾಲ್ಕೈದು ದಿನಗಳವರೆಗೆ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.