ಕರಾವಳಿ
ಕಟಪಾಡಿ ನಿವಾಸಿ ಪ್ರಕಾಶ್ ರಾವ್ ನಾಪತ್ತೆ..!

ಕಟಪಾಡಿ : ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ
ರಿಯಲ್ ಎಸ್ಟೇಟ್ ವ್ಯವಹಾರಸ್ಥರೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.
ಕಟಪಾಡಿ ನಿವಾಸಿ ಪ್ರಕಾಶ್ ರಾವ್ (46) ಮೇ 9ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ ಪ್ರಕಾಶ್ ಅವರು ಕಟಪಾಡಿಯ ತನ್ನ ಮನೆಯಿಂದ ಹೊರಟು ಬಾರ್ಕೂರು ಗರಿಕೆ ಮಠ ದೇವಸ್ಥಾನಕ್ಕೆಂದು ಹೋಗಿದ್ದ ಅವರು ವಾಪಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತರಾಗಿರುವ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಉರುಟು ಮುಖ, ಕಪ್ಪು ಮೈಬಣ್ಣ, ಸಾಮಾನ್ಯ ಮೈಕಟ್ಟು ಹೊಂದಿರುವ ಅವರು, ನೀಲಿ ಬಣ್ಣದ ಟೀ ಶರ್ಟ್, ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.